ಕನ್ನಡ ಬರಹ ಇವತ್ತು ಒಂದು ಸಂದಿಕಾಲವನ್ನು ಎದುರಿಸುತ್ತಿದೆ. ಕರ್ನಾಟಕದ ನಗರಗಳಲ್ಲಿ ವಾಸಿಸುವ ಮೇಲ್ವರ್ಗದ ಮಕ್ಕಳಿಗೆಲ್ಲ ಈಗಾಗಲೇ ಆ ಬರಹ ಬೇಡವಾಗಿದೆ. ನಮ್ಮ ಸಮಾಜದ ಉಳಿದ ಮಕ್ಕಳೂ ಇದೇ ದಾರಿಯನ್ನು ಹಿಡಿದಲ್ಲಿ ಕ್ರಮೇಣ
ಕನ್ನಡ ಬರಹಕ್ಕೆ ಸಂಸ್ಕ್ರುತ ಬರಹದ ಅವಸ್ತೆಯೇ ಬಂದೀತು. ಕನ್ನಡ ಬರಹ ಸಂಸ್ಕ್ರುತದ ದಾರಿಯನ್ನು ಹಿಡಿಯದ ಹಾಗಾಗಬೇಕಿದ್ದಲ್ಲಿ ನಾವು ಅದಕ್ಕೆ ಬೇರೆಯೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.
ಆ ಪರಿಹಾರ ಎಂತಹದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.