ಈ ಪುಸ್ತಕದಲ್ಲಿ ಕನ್ನಡ ನುಡಿಯ ಬಗೆಗೆ ಮೂರು ಭಾಗಗಳಿಂದ ಚಿಂತನೆಯನ್ನು ನಡೆಸುವ ಪ್ರಯತ್ನ ಮಾಡಲಾಗಿದೆ.
ಮೊದಲನೆಯದಾಗಿ ಕನ್ನಡದ ವ್ಯಾಕರಣ, ಎರಡನೆಯದಾಗಿ ಕನ್ನಡದ ಬರಹ ಮತ್ತು ಮೂರನೆಯದಾಗಿ ಕನ್ನಡದ ಚರಿತ್ರೆ.
ಮೊದಲನೆಯ ಭಾಗದಲ್ಲಿ, ಕನ್ನಡಕ್ಕೆ ಅದರದೇ ಆದ ಹೊಸದೊಂದು ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ವಿವರಿಸಲಾಗಿದೆ.
ಎರಡನೆಯ ಭಾಗದಲ್ಲಿ, ಕನ್ನಡ ಬರಹ ಬರಿಯ ಮೇಲ್ವರ್ಗದವರ ಸೊತ್ತಾಗಿ ಉಳಿಯದೆ ಎಲ್ಲರ ಸೊತ್ತಾಗಿ ಹೇಗೆ ಮಾಡಬೇಕು ಎಂಬುದನ್ನು ವಿವರಿಸಾಲಾಗಿದೆ.
ಮತ್ತು ಮೂರನೆಯ ಭಾಗದಲ್ಲಿ, ಕನ್ನಡ ನುಡಿಗೆ ಭಾರತದ ಬೇರೆ ಹಲವು ದ್ರಾವಿಡ ನುಡಿಗಳೊಂದಿಗೆ ಇರುವ ನಂಟಸ್ತನದ ಸ್ವರೂಪವೇನು ಎಂಬುದನ್ನು ವಿವರಿಸಲಾಗಿದೆ.