ಕನ್ನಡ ವ್ಯಾಕರಣಗಳಲ್ಲಿ ಸರ್ವನಾಮಗಳ ಕುರಿತಾಗಿ ಹೆಚ್ಚೇನು ಹೇಳುವ ಸಂಪ್ರದಾಯವಿಲ್ಲ. ಹೇಳಿದರೂ ಸಂಸ್ಕೃತ ವ್ಯಾಕರಣಗಳಲ್ಲಿ ಹೇಳಿದ್ದನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವ ಪ್ರಯತ್ನ ನಡೆಯುತ್ತದೆ.
ಆದರೆ ನಿಜಕ್ಕೂ ಕನ್ನಡದ ಸರ್ವನಾಮಗಳ ಕುರಿತಾಗಿ ನಾವು ಹೇಳಬಹುದಾದ ವಿಷಯಗಳು ಹಲವಿವೆ. ಇವುಗಳ ಕುರಿತಾಗಿ ಇನ್ನೂ ಬಹಳಷ್ಟು ಸಂಶೋಧನೆ ನಡೆಯಬೇಕಿದ್ದು, ಇದು ಯಾವ ದಿಕ್ಕಿನಲ್ಲಿ ನಡೆಯಲು ಸಾಧ್ಯ ಎಂಬುದನ್ನು
ಈ ಪುಸ್ತಕ ಸೂಚಿಸುತ್ತದೆ.