ಎಲ್ಲರ ಕನ್ನಡ ಓದುಕೂಟ - 2011

ಬನವಾಸಿ ಬಳಗವು, ಕನ್ನಡ ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಎಲ್ಲರ ಕನ್ನಡ” ಓದುಕೂಟ – 2011 ಅತ್ಯಂತ ಯಶಸ್ವಿಯಾಗಿ ಜರುಗಿತು.

ಬನವಾಸಿ ಬಳಗದ ಶ್ರೀ ಆನಂದ್ ಅವರು 'ಎಲ್ಲರಕನ್ನಡ ಓದುಕೂಟ - ೨೦೧೧' ಕಾರ್ಯಕ್ರಮದ ಮುನ್ನುಡಿ ಮಾತುಗಳನ್ನಾಡಿದರು. ಬನವಾಸಿ ಬಳಗ ಯಾಕೆ ಈ ಕೆಲಸಗಳನ್ನ ಮಾಡುತ್ತಿದೆ, ಈ ಕಾರ್ಯಕ್ರಮ ಹೇಗೆ ನಡೆದುಕೊಂಡು ಹೋಗುತ್ತೆ ಎಂಬುದರ ಬಗ್ಗೆ ಆನಂದ್ ಅವರ ಮಾತುಗಳು ಮತ್ತು 'ದೀಪ ಬೆಳಗುವಿಕೆಯ' ದೃಶ್ಯಚಿತ್ರಗಳನ್ನ ಈ ಕೆಳಗೆ ನೋಡಬಹುದಾಗಿದೆ.



ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮಾಜದ ಏಳಿಗೆಯಲ್ಲಿ ನುಡಿ ಅಧ್ಯಯನದ ಮಹತ್ವವನ್ನು ತಿಳಿಸಿಕೊಟ್ಟರು. ಯಾವುದೇ ನಾಡಿನ ಏಳಿಗೆಗೆ ಆ ನಾಡಿನ ಜನರಲ್ಲಿನ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗುವುದು ಅಗತ್ಯವಾಗಿರುವುದು ಜಗತ್ತು ಕಂಡುಕೊಂಡಿರುವ ಸತ್ಯ. ಅಂತೆಯೇ ಕನ್ನಡಿಗರ ಏಳಿಗೆಗೆ ಕನ್ನಡಿಗರ ಕಲಿಕಾ ವ್ಯವಸ್ಥೆ ಅತ್ಯುತ್ತಮವಾಗಬೇಕಾಗಿದೆ. ಇದರೊಟ್ಟಿಗೆ ಕನ್ನಡ ನುಡಿಯು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಲ್ಲಷ್ಟು ಶಕ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವು ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಎಂಬ ನಿಲುವಿನ ಹಿನ್ನೆಲೆಯಲ್ಲಿ ಕನ್ನಡನಾಡಿನ ಭಾಷಾಧ್ಯಯನ ಕ್ಷೇತ್ರದಲ್ಲಿ ದುಡಿಯುವುತ್ತಿರುವವರನ್ನು ಒಂದೆಡೆ ಸೇರಿಸಿ ಸದರಿ ಕೆಲಸಕ್ಕೆ ವೇಗ ತಂದುಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.
ಶ್ರೀ ಕಿರಣ್ ಬಾ ರಾ ಅವರ ಪ್ರಾಸ್ತಾವಿಕ ನುಡಿಯ ದೃಶ್ಯಚಿತ್ರಗಳನ್ನು ಇಲ್ಲಿ ಕೆಳಗೆ ನೋಡಬಹುದಾಗಿದೆ.





ನುಡಿಯರಿಗರಿಂದ ಸಮಾಜಕ್ಕೆ ಯಾವ ರೀತಿಯ ಕೊಡುಗೆ ಸಾಧ್ಯವಿದೆ. ಸಮಾಜದ ಏಳಿಗೆಯ ದೃಷ್ಟಿಯಿಂದ ನುಡಿಯರಿಗರು ಮಾಡಬೇಕಾದ ಮಹತ್ವದ ಕೆಲಸಗಳು ಯಾವುವು ಎಂಬ ವಿಷಯದ ಬಗ್ಗೆ ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಮಾತನಾಡಿದರು. ಅವರ ಮಾತುಗಳ ದೃಶ್ಯಚಿತ್ರವನ್ನು ಈ ಕೆಳಗೆ ನೋಡಬಹುದಾಗಿದೆ.



ನಾಡಿನ ಹಿರಿಯ ನುಡಿಯರಿಗರಾದ ಡಾ|| ಕೆ.ವಿ.ನಾರಾಯಣ ಅವರು 'ಎಲ್ಲರಕನ್ನಡ ಓದುಕೂಟ ೨೦೧೧' ರಲ್ಲಿ ಸುಮಾರು ಒಂದು ಗಂಟೆ ಕಾಲದ ಉಪನ್ಯಾಸ ನೀಡಿದರು. ಕನ್ನಡ ನುಡಿಯ ಬಗೆಗೆ ನಡೆಯುತ್ತಿರುವ ಅಧ್ಯಯನ ಎದುರಿಸುತ್ತಿರುವ ತೊಡಕುಗಳೇನು, ಅವನ್ನು ನಿವಾರಿಸಲು ಯಾವೆಲ್ಲಾ ರೀತಿಯ ಕೆಲಸಗಳಾಗಬೇಕು, ಸಾಂಸ್ಥಿಕವಾಗಿ ನುಡಿಯರಿಮೆಯ ಕೆಲಸಗಳನ್ನು ಕೈಗೆತ್ತಿಕೊಳ್ಳುವುದರ ಲಾಭವೇನು ಹಾಗೂ ತಂತ್ರಜ್ಞಾನದ ಸುತ್ತ ನುಡಿಗೆ ಸಂಬಂಧಪಟ್ಟ ಆಗಬೇಕಾದ ಕೆಲಸಗಳೇನು ಎಂಬುದರ ಬಗ್ಗೆ ಮನಮುಟ್ಟುವಂತೆ ಮಾತನಾಡಿದರು. ಒಂದು ನುಡಿಯ ಬೆಳವಣಿಗೆಯನ್ನು, ಹರಿದು ಬಂದ ರೀತಿಯನ್ನು ತಿಳಿಯಲು ನೋಡಬಹುದಾದ ಕಟ್ಟಳೆಗಳೇನು ಎಂಬುದನ್ನು ತಿಳಿಸಲು 'ಆಲದ ಮರ' ಮತ್ತು 'ಮ್ಯಾಪಲ್ ಟ್ರೀ' ಉದಾಹರಣೆ ತೆಗೆದುಕೊಂಡು ಅರ್ಥಪೂರ್ಣವಾಗಿ ವಿವರಿಸಿದರು. ಡಾ|| ಕೆ.ವಿ ನಾರಾಯಣ ಅವರ ಉಪನ್ಯಾಸದ ದೃಶ್ಯಚಿತ್ರಗಳನ್ನು ಈ ಕೆಳಗೆ ನೋಡಬಹುದು. ಸುಮಾರು ಒಂದು ಗಂಟೆಯ ಉಪನ್ಯಾಸವನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ.

ಭಾಗ - 1



ಭಾಗ - 2



ಭಾಗ - 3



ಭಾಗ - 4



ಭಾಗ - 5



ಭಾಗ - 6