ಡಿ. ಎನ್. ಶಂಕರಭಟ್ಟರ ಹೊತ್ತಿಗೆಗಳು

ಮಿಂಬಲೆಗರಲ್ಲಿ ಎಲ್ಲರಕನ್ನಡದ (ಮತ್ತು ಬೇರೆಲ್ಲ "ಕನ್ನಡಂಗಳ") ನುಡಿಯರಿಮೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಮೊಟ್ಟಮೊದಲ ಬಾರಿಗೆ ಭಟ್ಟರ ಎಲ್ಲ ಕನ್ನಡದ ಹೊತ್ತಿಗೆಗಳನ್ನೂ ಉಚಿತವಾಗಿ ಪಿಡಿಎಫ್ ಮಾದರಿಯಲ್ಲಿ ಇಲ್ಲಿ ಇರಿಸಲಾಗಿದೆ. ಓದುಗರು ಇದರ ಉಪಯೋಗ ಪಡೆದುಕೊಂಡು ಈ ಯೋಜನೆಯಲ್ಲಿ ಆಸಕ್ತಿ ತೋರುವರೆಂದೂ, ಈ ಯೋಜನೆಗೆ ಮೈ-ಮನ-ಹಣವಿತ್ತು ಬೆಂಬಲಿಸುವರೆಂದೂ ನಂಬಿದ್ದೇವೆ.

ಭಾಷೆಯ ಬಗೆಗೆ ನೀವೇನು ಬಲ್ಲಿರಿ?

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೧೯೮
ಅಚ್ಚುಗಳು: ಮೂರನೇ ಪರಿಷ್ಕೃತ ಮತ್ತು ವಿಸ್ತೃತ ಮುದ್ರಣ


ಈ ಹೊತ್ತಗೆ ಭಾಷೆಯ ಸ್ವರೂಪ, ಮಾತು ಮತ್ತು ಬರಹದ ಸಂಬಂಧ, ಕನ್ನಡ ಭಾಷೆಯ ಸ್ವರೂಪ, ಭಾಷೆಯ ವೈವಿಧ್ಯತೆಯ ಬಗ್ಗೆ ವಿವರವಾಗಿ ಚರ್ಚಿಸುತ್ತದೆ. ಡಿ. ಎನ್ ಶಂಕರ ಭಟ್ಟರು ಭಾಷೆಯ ಅಧ್ಯಯನ ಮಾಡಿ ಬರೆದ ಹೊತ್ತಗೆ ಇದು.

ನಿಮ್ಮ ಗಮನಕ್ಕೆ:
ಈ ಹೊತ್ತಗೆಯ ಪ್ರತಿಗಳೆಲ್ಲ ಮುಗಿದುಹೋಗಿವೆ. ಇನ್ನೊಮ್ಮೆ ಅಚ್ಚುಹಾಕಿಸುವ ಹಮ್ಮುಗೆ ಈಗ ಇಲ್ಲ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು.

ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೭೪
ಅಚ್ಚುಗಳು: ಮೊದಲನೇ ಆವೃತ್ತಿ:೨೦೦೫
ಬೆಲೆ: ರೂ ೬೫

ಕೇಶಿರಾಜನೇ ಮೊದಲಾದ ಹಳೆಗನ್ನಡ ವೈಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯ ಎಂಬ ಭ್ರಮೆಯಲ್ಲಿದ್ದರು. ಈ ಭ್ರಮೆಯಿಂದಾಗಿ ಅವರು ತಮ್ಮ ವ್ಯಾಕರಣಗಳ ಹೆಚ್ಚಿನ ವಿಭಾಗಗಳಲ್ಲೂ ಹಳೆಗನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹದು ಎಂಬುದನ್ನು ವಿವರಿಸಿ ಹೇಳುವಲ್ಲಿ ಎಡವಿದ್ದಾರೆ. ಇದನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಕನ್ನಡ ಬರಹವನ್ನು ಸರಿಪಡಿಸೋಣ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೩೬೯
ಅಚ್ಚುಗಳು: ತಿದ್ದಿ ದೊಡ್ಡದು ಮಾಡಿದ ಎರಡನೆಯ ಅಚ್ಚು : ೨೦೦೯
ಬೆಲೆ: ರೂ ೧೬೦

ಕನ್ನಡ ಬರಹ ಇವತ್ತು ಒಂದು ಸಂದಿಕಾಲವನ್ನು ಎದುರಿಸುತ್ತಿದೆ. ಕರ್ನಾಟಕದ ನಗರಗಳಲ್ಲಿ ವಾಸಿಸುವ ಮೇಲ್ವರ್ಗದ ಮಕ್ಕಳಿಗೆಲ್ಲ ಈಗಾಗಲೇ ಆ ಬರಹ ಬೇಡವಾಗಿದೆ. ನಮ್ಮ ಸಮಾಜದ ಉಳಿದ ಮಕ್ಕಳೂ ಇದೇ ದಾರಿಯನ್ನು ಹಿಡಿದಲ್ಲಿ ಕ್ರಮೇಣ ಕನ್ನಡ ಬರಹಕ್ಕೆ ಸಂಸ್ಕ್ರುತ ಬರಹದ ಅವಸ್ತೆಯೇ ಬಂದೀತು. ಕನ್ನಡ ಬರಹ ಸಂಸ್ಕ್ರುತದ ದಾರಿಯನ್ನು ಹಿಡಿಯದ ಹಾಗಾಗಬೇಕಿದ್ದಲ್ಲಿ ನಾವು ಅದಕ್ಕೆ ಬೇರೆಯೇ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಆ ಪರಿಹಾರ ಎಂತಹದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಕನ್ನಡ ನುಡಿ ನಡೆದು ಬಂದ ದಾರಿ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೩೪೩
ಅಚ್ಚುಗಳು: ಮೊದಲನೆಯ ಮುದ್ರಣ : ೨೦೦೭
ಬೆಲೆ: ರೂ ೧೯೦

ಕನ್ನಡ ನುಡಿ ಮೂಲದ್ರಾವಿಡದಿಂದ ಬದಲಾಗುತ್ತಾ ಬಂದ ಬಗೆ ಹೇಗೆ ಎಂಬುದನ್ನ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಮೂಲದ್ರಾವಿಡದ ಸ್ವರ ಮತ್ತು ವ್ಯಂಜನಗಳು ಕನ್ನಡದ ಚರಿತ್ರೆಯಲ್ಲಿ ಯಾವ ರೀತಿಯ ಬದಲಾವಣೆಗಳಿಗೆಲ್ಲ ಒಳಗಾಗಿವೆ ಎಂಬುದನ್ನು ಆ ವಿಷಯದಲ್ಲಿ ಇತ್ತೀಚಿಗಿನವರೆಗೂ ನಡೆದಿರುವ ಸಂಶೋಧನೆಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿ ಹೆಚ್ಚು ವಿವರವಾಗಿ ಕೊಡಲಾಗಿದೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಕನ್ನಡ ಪದಗಳ ಒಳರಚನೆ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೪೦
ಅಚ್ಚುಗಳು: ತಿದ್ದಿ ದೊಡ್ಡದು ಮಾಡಿರುವ ಎರಡನೇ ಆವೃತ್ತಿ


ಸಂಸ್ಕೃತ ಪದಗಳ ಒಳರಚನೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಾಗುತ್ತವೆಯೋ ಅವನ್ನೇ ಬಳಸಿ ಕನ್ನಡ ಪದಗಳ ಒಳರಚನೆಯನ್ನೂ ವರ್ಣಿಸುವುದು ರೂಢಿ. ಆದರೆ, ಕನ್ನಡ ಸಂಸ್ಕೃತಕ್ಕಿಂತ ತೀರ ಭಿನ್ನವಾದ ಭಾಷೆಯಾದ ಕಾರಣ, ಈ ವಿಧಾನದ ಮೂಲಕ ನಮಗೆ ಕನ್ನಡ ಪದಗಳ ನಿಜವಾದ ಸ್ವರೂಪವೇನು ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಕನ್ನಡ ಪದಗಳನ್ನು ನೇರವಾಗಿ ಪರಿಶೀಲಿಸಿ, ಅವುಗಳ ತಯಾರಿಕೆಯಲ್ಲಿ ಎಂತಹ ನಿಯಮಗಳೆಲ್ಲ ಬಳಕೆಯಲ್ಲಿವೆ, ಹೇಗೆ ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಪದಗಳನ್ನು ಒಟ್ಟು ಸೇರಿಸಿ ಜೋಡುಪದಗಳನ್ನು ತಯಾರಿಸಲಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ.

ನಿಮ್ಮ ಗಮನಕ್ಕೆ:
ಈ ಹೊತ್ತಗೆಯ ಪ್ರತಿಗಳೆಲ್ಲ ಮುಗಿದುಹೋಗಿವೆ. ಇನ್ನೊಮ್ಮೆ ಅಚ್ಚುಹಾಕಿಸುವ ಹಮ್ಮುಗೆ ಈಗ ಇಲ್ಲ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು.

ಕನ್ನಡದ ಸರ್ವನಾಮಗಳು

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೧೯೩
ಅಚ್ಚುಗಳು: ಮೊದಲನೆಯ ಆವೃತ್ತಿ: ೨೦೦೩


ಕನ್ನಡ ವ್ಯಾಕರಣಗಳಲ್ಲಿ ಸರ್ವನಾಮಗಳ ಕುರಿತಾಗಿ ಹೆಚ್ಚೇನು ಹೇಳುವ ಸಂಪ್ರದಾಯವಿಲ್ಲ. ಹೇಳಿದರೂ ಸಂಸ್ಕೃತ ವ್ಯಾಕರಣಗಳಲ್ಲಿ ಹೇಳಿದ್ದನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸುವ ಪ್ರಯತ್ನ ನಡೆಯುತ್ತದೆ. ಆದರೆ ನಿಜಕ್ಕೂ ಕನ್ನಡದ ಸರ್ವನಾಮಗಳ ಕುರಿತಾಗಿ ನಾವು ಹೇಳಬಹುದಾದ ವಿಷಯಗಳು ಹಲವಿವೆ. ಇವುಗಳ ಕುರಿತಾಗಿ ಇನ್ನೂ ಬಹಳಷ್ಟು ಸಂಶೋಧನೆ ನಡೆಯಬೇಕಿದ್ದು, ಇದು ಯಾವ ದಿಕ್ಕಿನಲ್ಲಿ ನಡೆಯಲು ಸಾಧ್ಯ ಎಂಬುದನ್ನು ಈ ಪುಸ್ತಕ ಸೂಚಿಸುತ್ತದೆ.

ನಿಮ್ಮ ಗಮನಕ್ಕೆ:
ಈ ಹೊತ್ತಗೆಯ ಪ್ರತಿಗಳೆಲ್ಲ ಮುಗಿದುಹೋಗಿವೆ. ಇನ್ನೊಮ್ಮೆ ಅಚ್ಚುಹಾಕಿಸುವ ಹಮ್ಮುಗೆ ಈಗ ಇಲ್ಲ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು.

ಕನ್ನಡ ವಾಕ್ಯಗಳ ಒಳರಚನೆ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೨೭
ಅಚ್ಚುಗಳು: ಎರಡನೆಯ ಅಚ್ಚು: ೨೦೦೬
ಬೆಲೆ: ರೂ ೧೨೦

ಕನ್ನಡದಲ್ಲಿ ಮಾತನಾಡುವಾಗ ಮತ್ತು ಬರೆಯುವಾಗ ಹಲವಾರು ರೀತಿಯ ಪದ ಮತ್ತು ಪದರೂಪಗಳನ್ನು ನಾವು ಲೀಲಾಜಾಲವಾಗಿ ಬಳಸುತ್ತಿರುತ್ತೇವೆ. ಆದರೆ ಹೀಗೆ ಮಾಡುವಾಗ ಹಲವಾರು ಬಹಳ ಕ್ಲಿಷ್ಟವಾದ ನಿಯಮಗಳನ್ನೂ ಪಾಲಿಸುತ್ತಿರಬೇಕಗುತ್ತದೆ ಎಂಬ ವಿಷಯ ನಮ್ಮ ಗಮನಕ್ಕೇ ಬರುವುದಿಲ್ಲ.ಈ ನಿಯಮಗಳು ನಮ್ಮ ಮಿದುಳಿನಲ್ಲಿ ಅರಿವಿಗೆ ಎಟಕದ ರೂಪದಲ್ಲಿ ಅಡಗಿಕೊಂಡಿರುವುದು ಮತ್ತು ಅಂತಹ ಅರಿವಿಗೆ ಎಟಕದ ರೂಪದಲ್ಲೇನೇ ಅವು ಬಳಕೆಯಾಗುತ್ತಿರುವುದು ಇದಕ್ಕೆ ಕಾರಣ. ಕನ್ನಡ ವಾಕ್ಯಗಳ ತಯಾರಿಕೆಯಲ್ಲಿ ಬಳಕೆಯಾಗುವ ಇಂತಹ ಅರಿವಿಗೆ ಎಟಕದ ನಿಯಮಗಳಲ್ಲಿ ಮುಖ್ಯವಾದ ಕೆಲವನ್ನು ಅರಿವಿಗೆ ಎಟಕುವಂತೆ ಮಾಡಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗಿದೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಮಾತಿನ ಒಳಗುಟ್ಟು

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೦೬
ಅಚ್ಚುಗಳು: ಮೊದಲನೆಯ ಅಚ್ಚು: ೨೦೦೮
ಬೆಲೆ: ರೂ ೧೨೦

ಮಾತು ನಮ್ಮ ನಾಲಗೆಯ ತುದಿಯಲ್ಲೇ ಕುಣಿಯುತ್ತದೆಯಾದರೂ ಅದರ ಕುರಿತು ನಾವು ಸರಿಯಾಗಿ ತಿಳಿದಿರುವುದಕ್ಕಿಂತಲೂ ತಪ್ಪಾಗಿ ಕಲ್ಪಿಸಿಕೊಂಡಿರುವುದೇ ಹೆಚ್ಚು. ಆದರೆ ಅದು ನಮಗೆಲ್ಲ ತುಂಬಾ ಪರಿಚಿತವಾಗಿರುವ ಕಾರಣ, ನಮ್ಮ ಈ ಕಲ್ಪನೆಗಳು ತಪ್ಪು ಎಂಬುದನ್ನು ತೋರಿಸಿಕೊಡುವುದೂ ಕಶ್ಟವೇ. ಅಂತಹದೊಂದು ಪ್ರಯತ್ನ ಈ ಪುಸ್ತಕದಲ್ಲಿ ನಡೆದಿದೆ. ನಲವತ್ತು ವರ್ಷಗಳ ಕಲಿಕೆ ಮತ್ತು ಸಂಶೋಧನೆಗಳ ಆಧಾರದ ಮೇಲೆ ಡಾ. ಶಂಕರಬಟ್ಟರು ಮಾತಿನ ಒಳಗುಟ್ಟೆಂತಹದು ಎಂಬುದನ್ನು ಈ ಹೊತ್ತಗೆಯಲ್ಲಿ ವಿವರಿಸಿದ್ದಾರೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೪೮
ಅಚ್ಚುಗಳು: ನಾಲ್ಕನೆಯ ಮುದ್ರಣ: ೨೦೦೮
ಬೆಲೆ: ರೂ ೧೪೦

ಒಂದು ಭಾಷೆಯಲ್ಲಿ ಬರುವ ಪದಗಳ ಮತ್ತು ವಾಕ್ಯಗಳ ಒಳರಚನೆಯೆಂತಹದು ಎಂಬುದನ್ನು ವಿವರಿಸಿ ಹೇಳುವುದೇ ವ್ಯಾಕರಣದ ಮುಖ್ಯ ಉದ್ದೇಶ. ಕನ್ನಡದಲ್ಲಿ ಪ್ರಕಟವಾಗಿರುವ ವ್ಯಾಕರಣಗಳಾವುವೂ ಈ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿಲ್ಲ. ಅವೆಲ್ಲ ಮುಖ್ಯವಾಗಿ ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಕನ್ನಡಕ್ಕೆ ಅಳವಡಿಸಲು ಪ್ರಯತ್ನಿಸುತ್ತವೆ. ಈ ನಿಯಮಗಳು ಕನ್ನಡ ವ್ಯಾಕರಣ ನಿಯಮಗಳಿಗಿಂತ ಬಹಳಷ್ಟು ಭಿನ್ನವಾಗಿವೆಯಾದ ಕಾರಣ ಕನ್ನಡ ಪದಗಳ ಮತ್ತು ವಾಕ್ಯಗಳ ರಚನೆಯನ್ನು ಸರಿಯಾಗಿ ವಿವರಿಸಲಾರವು. ನಿಜಕ್ಕೂ ಕನ್ನಡ ವ್ಯಾಕರಣ ನಿಯಮಗಳು ಎಂತಹದು, ಕನ್ನಡ ವ್ಯಾಕರಣಗಳಲ್ಲಿ ಅದರಲ್ಲೂ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವ್ಯಾಕರಣಗಳಲ್ಲಿ ಬರುವ ನಿಯಮಗಳಿಗಿಂತ ಅವು ಹೇಗೆ ಭಿನ್ನವಾಗಿವೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು. ಈ ಪುಸ್ತಕವನ್ನು ಇಲ್ಲಿ ಕೊಂಡುಕೊಳ್ಳಿರಿ.

ಕನ್ನಡ ನುಡಿಯ ಬಗೆಗೆ ಚಿಂತನೆ

ಹೊತ್ತಗೆಯ ವಿವರ

ಬರಹಗಾರರು: ಡಿ.ಎನ್ ಶಂಕರ ಭಟ್
ಪುಟಗಳು : ೨೭೯
ಅಚ್ಚುಗಳು: ಮೊದಲನೆಯ ಅಚ್ಚು: ೨೦೦೬


ಈ ಪುಸ್ತಕದಲ್ಲಿ ಕನ್ನಡ ನುಡಿಯ ಬಗೆಗೆ ಮೂರು ಭಾಗಗಳಿಂದ ಚಿಂತನೆಯನ್ನು ನಡೆಸುವ ಪ್ರಯತ್ನ ಮಾಡಲಾಗಿದೆ. ಮೊದಲನೆಯದಾಗಿ ಕನ್ನಡದ ವ್ಯಾಕರಣ, ಎರಡನೆಯದಾಗಿ ಕನ್ನಡದ ಬರಹ ಮತ್ತು ಮೂರನೆಯದಾಗಿ ಕನ್ನಡದ ಚರಿತ್ರೆ. ಮೊದಲನೆಯ ಭಾಗದಲ್ಲಿ, ಕನ್ನಡಕ್ಕೆ ಅದರದೇ ಆದ ಹೊಸದೊಂದು ವ್ಯಾಕರಣ ಪರಂಪರೆಯನ್ನು ಸಿದ್ಧಪಡಿಸುವುದು ಯಾಕೆ ಅವಶ್ಯ ಎಂಬುದನ್ನು ವಿವರಿಸಲಾಗಿದೆ. ಎರಡನೆಯ ಭಾಗದಲ್ಲಿ, ಕನ್ನಡ ಬರಹ ಬರಿಯ ಮೇಲ್ವರ್ಗದವರ ಸೊತ್ತಾಗಿ ಉಳಿಯದೆ ಎಲ್ಲರ ಸೊತ್ತಾಗಿ ಹೇಗೆ ಮಾಡಬೇಕು ಎಂಬುದನ್ನು ವಿವರಿಸಾಲಾಗಿದೆ. ಮತ್ತು ಮೂರನೆಯ ಭಾಗದಲ್ಲಿ, ಕನ್ನಡ ನುಡಿಗೆ ಭಾರತದ ಬೇರೆ ಹಲವು ದ್ರಾವಿಡ ನುಡಿಗಳೊಂದಿಗೆ ಇರುವ ನಂಟಸ್ತನದ ಸ್ವರೂಪವೇನು ಎಂಬುದನ್ನು ವಿವರಿಸಲಾಗಿದೆ.

ನಿಮ್ಮ ಗಮನಕ್ಕೆ:
ಈ ಹೊತ್ತಗೆಯ ಪ್ರತಿಗಳೆಲ್ಲ ಮುಗಿದುಹೋಗಿವೆ. ಇನ್ನೊಮ್ಮೆ ಅಚ್ಚುಹಾಕಿಸುವ ಹಮ್ಮುಗೆ ಈಗ ಇಲ್ಲ.

ಈ ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಇಲ್ಲಿಂದ ಇಳಿಸಿಕೊಳ್ಳಬಹುದು.